Sunday, June 26, 2016

ಕನ್ನಡಿ

ಕನ್ನಡಿ 



 ನಿನ್ನ ನೀನು ಅರಿಯಲೊಮ್ಮೆ ,
ಬಳಸಿ ನೋಡು ಕನ್ನಡಿ ..... 

ನಕ್ಕು ನೋಡು , ಅತ್ತು ನೋಡು ,
ನೋಡು ಓಮ್ಮೆ ನಿನ್ನ ಹಾಡು  ಹಾಡಿ...... 

ಮಾಡಿದ್ದೇನು, ಮಾಡುತ್ತಿರುವುದೇನು ,
ಮಾಡುವುದೇನು ಎಂದು ಅದಕೆ  ಕೇಳಿ ನೋಡಿ ...... 

ನಿನ್ನ ಪ್ರತಿಬಿಂಬಿವೇ  ಉತ್ತರಿಸುವುದು ,
ನಿನ್ನದೇ ಮನವ ಜಾಲಾಡಿ....... 

ದುಃಖದ್ದನ್ನು  ಮರೆಯುತಾ ,ಖುಷಿಯದನ್ನು ಮೆಲಕು ಹಾಕು  ,
ಮತ್ತೆ ಮುಂದೆ  ಒಳ್ಳೆಯದಕ್ಕೆ ಹುರುಪಿನಿಂದ ಪಣತೊಡಿ .... 

ಪ್ರೀತಿಸಿದರೆ ಪ್ರೀತಿಸುವುದು , ಬಯ್ದರೂ ಬಯ್ಯುವುದು ,
ಹೇಳಿದಂತೆ ಅನುಕರಿಸುವುದು ನಿನ್ನ ನೋಡಿ ...... 

ನಿನ್ನ ನೀನು ಅರಿಯಲಿರುವುದೊಂದೇ ಅದ್ಭುತ ಮಾರ್ಗ,
ಅದುವೇ ಈ ಕನ್ನಡಿ ....... 



Tuesday, May 31, 2011

ದುಡ್ಡು

ದುಡ್ಡು ದುಡ್ಡು .. ದುಡ್ಡು ದುಡ್ಡು ....
ದುಡ್ದೆಂಬೋ ದಡ್ಡು ಬಿತ್ತಲ್ಲೊ ಮಾರಾಯಾ ......

ದುಡ್ಡಿಗೆ ಗೊತ್ತಿಲ್ಲ ಜಾತಿ ನೀತಿ .....
ಎಲ್ಲರ ನುಂಗುವುದು ತಿಳಿ ಗೆಳೆಯ .......

ಬಿಡಿ ಎಂದು ಹೇಳಿಯು ಬಿಡಲಾರೆನು ನಾ...
ಅದುವೇ ನೋಡೋ ದುಡ್ಡಿನ ಮಾಯಾ ....

ಬೇಕದು ಅಷ್ಟಿಷ್ಟು ಯಾವಾಗಲು......
ಗಣತಿಗಿಲ್ಲ ನಿನ್ನ ಪ್ರಾಯ.......

ಮಠಕ್ಕೂ ಬೇಕು, ಚಟಕ್ಕೂ ಬೇಕು, ಬದುಕಲೂ ಬೇಕು.....
ಎಲ್ಲರಿಗೂ ಬೇಕು ದುಡ್ಡಿನ ಅಕ್ಷಯ ......

 
ಗಂಡನಲ್ಲೂ ಬೇಕು ದುಡ್ಡು, ಹೆಂಡತಿಯೂ ತರಬೇಕು ದುಡ್ಡು.....
ಇವೆಲ್ಲದರ ನಡುವೆ ಕಳೆದು ಹೋಗಿದೆ ಹೃದಯ .....

 
ಎಲ್ಲವನ್ನು ಗೆದ್ದಿರಬಹುದು ಈ ದುಡ್ದೆಂಬ ಮಾಯೆ .....
ಗೆಲ್ಲಲಾಗಲಿಲ್ಲ ಅದಕೆ ಪ್ರೀತಿ ಮಮತೆಯ .......

Thursday, April 22, 2010

ಪ್ರೀತಿಋತು

ಬೆಂದು ಹೋಗುವ ಬಿಸಿಲಿನಲಿ,
ಪ್ರೀತಿಯೆಂಬ ಧಾರೆಯ ಹುಡುಕಾಟದಲಿ,
ಹೋರಟೆ ನಾನು ........

ಸಮಾಜವೆಂಬ ಬೆಂಕಿ ಪಾದದಡಿಯಲಿ,
ತಿರಸ್ಕಾರದ ಭಾವ ಇತರರ ಮಾತಿನಲಿ,
ಪಡೆದೆ ನಾನು.........

ಪುಳುಕಿತಗೊಳಿಸುವ ತುಂತುರು ಮಳೆ ,
ಮೊಳಕೆಯೋಡೆಯುವುದೆಂದು  ಪ್ರೀತಿಯ ಬೆಳೆ,
ತಿಳಿದೆ ನಾನು............


ಜಾತಿ ಮತವೆಂಬ ಈ ಕಳೆ,
ಮಾಡಿತು ನಿರ್ಮಲ ಪ್ರಿತಿಯನು ಕೊಳೆ,
ಮರಗುವೆನು ನಾನು .........

ಚುಮು ಚುಮು ಚಳಿಯ ಚಳಿಗಾಲ,
ಪ್ರೀತಿ ಬದಲಾಗಲಿಲ್ಲ ಬದಲಾದರೂ ಕಾಲ,
ಸಂತೋಷ ಪಡುವೆನು ನಾನು.......

ಸಮಾಜದಲಿ ಅಹಂ ಎನ್ನುವ  ಭಾವ ಸ್ಥೂಲ,
ಸ್ಫಂದಿಸುವ ಮನಗಳಿಗೆ ಅದೇ ಶೂಲ,
ಸಮಾಜದ ಭಾಗವಾಗಿ ಹೋದೆ ನಾನು ......

                                             - ನಯನ

Tuesday, April 6, 2010

Nayan

Life is tangible , if you try to feel it...
It is intangible, if you just try to see it..

Life shows you ups and downs,
which finally lead to kings crown....

Think Life is a wind, fly being the kite,
Think always positive, you are always right....

For you, if you be the word,
World will be the rhyme....
Try to be meaningful word,
Dont wait for time....
                             -Nayan

ಜೀವನ

ಕಾಣದೆ ಹೋದೆ ಜೀವನದ ಸತ್ವ ,
ಹುಡುಕಾಟದಲಿ  ನನ್ನ ಅಸ್ತಿತ್ವ ....

ಆಮಂತ್ರಣ ಬೇಕೇ ಹಾರಲು ಹಕ್ಕಿಗಳಿಗೆ ...
ಕಾರಣ ಬೇಕೇ ಈ ಮನಸ್ಸಿನ ಭಾವನೆಗಳಿಗೆ ......


ಬುದ್ಧಿಮಾಂದ್ಯ ಈ ಪುಟ್ಟ ಹೃದಯ ...
ಕಾಣುತಿದೆ ಸಾಧ್ಯವಾಗದ ಗುರಿಯ........

ಸಾಧಿಸಿಯೇ ತೀರುವೆ ಎನ್ನುತಿದೆ ಮನಸು ...
ಬಯಕೆಯಿದೆ ತೊಡಕಾಗದಿರಲಿ ವಯಸು ....


ಗೆದ್ದೇ ಗೆಲ್ಲುವೆ !!! ಗೆದ್ದಾಗ ಹಿಗ್ಗುವುದಿಲ್ಲ ....
ಸೋತರೆ ಕಾರಣ ನನ್ನ ಭಾವನೆಯಷ್ಟೇ ಬೇರಾರು ಅಲ್ಲ...
                                                        -ನಯನ

Monday, April 5, 2010

ಮೈಯನು ಹಿಂಡಿ ನೊಂದರು , ಕಬ್ಬು ಸಿಹಿ ಕೊಡುವುದು ....


ಮನಸ್ಸನ್ನು ಕಾಡಿಸಿ ನೊಂದರು , ಹೃದಯ ಪ್ರೀತಿ ಕೊಡುವುದು....

Thursday, April 1, 2010

ಮನಸಿನ ಮಾತು

ಜೀವನದ ಈ ಪುಸ್ತಕದಲ್ಲಿ ,
ಕಳೆದಿದೆ ಪ್ರೇಮದ ಪುಟಗಳು ....

ಹೃದಯದಾ ಈ ಕವಿತೆಯಲಿ ,
ಮಾಸಿದೆ ಪ್ರೀತಿಯ ಪದಗಳು ......

ಕೇಳದೆ ಹೇಳಿದೆ ಕಥೆಯನು ,
ಎಲ್ಲಿವೆ ಆ ಪಾತ್ರಗಳು ........

ಕ್ಷಣ ಕ್ಷಣ ಕೊಲ್ಲುತಿದೆ ,
ಹಳೆಯ ಸುಂದರ ಕ್ಷಣಗಳು ....

ಇಬ್ಬನಿ ಕಂಡಿತೆ ನಿನಗೆ
ನನ್ನ ಕಣ್ಣ ಹನಿಗಳು....

ಮನಸಿನ ಈ ಮಾತುಗಳನು
ಹೇಳಲು ಸಾಲುತ್ತಿಲ್ಲ ಪದಗಳು..........

                                     -ನಯನ