Thursday, April 22, 2010

ಪ್ರೀತಿಋತು

ಬೆಂದು ಹೋಗುವ ಬಿಸಿಲಿನಲಿ,
ಪ್ರೀತಿಯೆಂಬ ಧಾರೆಯ ಹುಡುಕಾಟದಲಿ,
ಹೋರಟೆ ನಾನು ........

ಸಮಾಜವೆಂಬ ಬೆಂಕಿ ಪಾದದಡಿಯಲಿ,
ತಿರಸ್ಕಾರದ ಭಾವ ಇತರರ ಮಾತಿನಲಿ,
ಪಡೆದೆ ನಾನು.........

ಪುಳುಕಿತಗೊಳಿಸುವ ತುಂತುರು ಮಳೆ ,
ಮೊಳಕೆಯೋಡೆಯುವುದೆಂದು  ಪ್ರೀತಿಯ ಬೆಳೆ,
ತಿಳಿದೆ ನಾನು............


ಜಾತಿ ಮತವೆಂಬ ಈ ಕಳೆ,
ಮಾಡಿತು ನಿರ್ಮಲ ಪ್ರಿತಿಯನು ಕೊಳೆ,
ಮರಗುವೆನು ನಾನು .........

ಚುಮು ಚುಮು ಚಳಿಯ ಚಳಿಗಾಲ,
ಪ್ರೀತಿ ಬದಲಾಗಲಿಲ್ಲ ಬದಲಾದರೂ ಕಾಲ,
ಸಂತೋಷ ಪಡುವೆನು ನಾನು.......

ಸಮಾಜದಲಿ ಅಹಂ ಎನ್ನುವ  ಭಾವ ಸ್ಥೂಲ,
ಸ್ಫಂದಿಸುವ ಮನಗಳಿಗೆ ಅದೇ ಶೂಲ,
ಸಮಾಜದ ಭಾಗವಾಗಿ ಹೋದೆ ನಾನು ......

                                             - ನಯನ

Tuesday, April 6, 2010

Nayan

Life is tangible , if you try to feel it...
It is intangible, if you just try to see it..

Life shows you ups and downs,
which finally lead to kings crown....

Think Life is a wind, fly being the kite,
Think always positive, you are always right....

For you, if you be the word,
World will be the rhyme....
Try to be meaningful word,
Dont wait for time....
                             -Nayan

ಜೀವನ

ಕಾಣದೆ ಹೋದೆ ಜೀವನದ ಸತ್ವ ,
ಹುಡುಕಾಟದಲಿ  ನನ್ನ ಅಸ್ತಿತ್ವ ....

ಆಮಂತ್ರಣ ಬೇಕೇ ಹಾರಲು ಹಕ್ಕಿಗಳಿಗೆ ...
ಕಾರಣ ಬೇಕೇ ಈ ಮನಸ್ಸಿನ ಭಾವನೆಗಳಿಗೆ ......


ಬುದ್ಧಿಮಾಂದ್ಯ ಈ ಪುಟ್ಟ ಹೃದಯ ...
ಕಾಣುತಿದೆ ಸಾಧ್ಯವಾಗದ ಗುರಿಯ........

ಸಾಧಿಸಿಯೇ ತೀರುವೆ ಎನ್ನುತಿದೆ ಮನಸು ...
ಬಯಕೆಯಿದೆ ತೊಡಕಾಗದಿರಲಿ ವಯಸು ....


ಗೆದ್ದೇ ಗೆಲ್ಲುವೆ !!! ಗೆದ್ದಾಗ ಹಿಗ್ಗುವುದಿಲ್ಲ ....
ಸೋತರೆ ಕಾರಣ ನನ್ನ ಭಾವನೆಯಷ್ಟೇ ಬೇರಾರು ಅಲ್ಲ...
                                                        -ನಯನ

Monday, April 5, 2010

ಮೈಯನು ಹಿಂಡಿ ನೊಂದರು , ಕಬ್ಬು ಸಿಹಿ ಕೊಡುವುದು ....


ಮನಸ್ಸನ್ನು ಕಾಡಿಸಿ ನೊಂದರು , ಹೃದಯ ಪ್ರೀತಿ ಕೊಡುವುದು....

Thursday, April 1, 2010

ಮನಸಿನ ಮಾತು

ಜೀವನದ ಈ ಪುಸ್ತಕದಲ್ಲಿ ,
ಕಳೆದಿದೆ ಪ್ರೇಮದ ಪುಟಗಳು ....

ಹೃದಯದಾ ಈ ಕವಿತೆಯಲಿ ,
ಮಾಸಿದೆ ಪ್ರೀತಿಯ ಪದಗಳು ......

ಕೇಳದೆ ಹೇಳಿದೆ ಕಥೆಯನು ,
ಎಲ್ಲಿವೆ ಆ ಪಾತ್ರಗಳು ........

ಕ್ಷಣ ಕ್ಷಣ ಕೊಲ್ಲುತಿದೆ ,
ಹಳೆಯ ಸುಂದರ ಕ್ಷಣಗಳು ....

ಇಬ್ಬನಿ ಕಂಡಿತೆ ನಿನಗೆ
ನನ್ನ ಕಣ್ಣ ಹನಿಗಳು....

ಮನಸಿನ ಈ ಮಾತುಗಳನು
ಹೇಳಲು ಸಾಲುತ್ತಿಲ್ಲ ಪದಗಳು..........

                                     -ನಯನ

Wednesday, March 31, 2010

ಬಿಂಬ

ಬಿಂಬಿಸಿರಲಿಲ್ಲ ನನ್ನ ಬಿಂಬವ ಆ ಘಳಿಗೆಯ ವರೆಗೂ ,
ನನ್ನ ನೋಡಿ ಹೊರಬಂದಾಗ ಅಪಹಾಸ್ಯದ ನಗು......

ಗೋಚರಿಸುವ ಬಾಹ್ಯ ಅಂದಕೆ ಲೋಕದ ಪ್ರಶಂಸೆ ,
ಅಗೋಚರ ಮನಸ್ಸಿನ ಭಾವನೆಗಳಿಗೆ ಹಿಂಸೆ ...

ನಾನು ಮಾಡಿಕೊಂಡಿರುವುದಲ್ಲ ಈ ನನ್ನ ರೂಪ ,
ಇದ್ದಿರಬಹುದು ಸೃಷ್ಟಿಕರ್ತನಿಗೆ  ಏನೋ ಕೋಪ ....

ಯಾರು ಸಹಿಸುತಿಲ್ಲ ನನ್ನ ರೂಪವ ತಾಯಿಯ ಹೊರತು,
ಯಲ್ಲರೂ ನೋಯಿಸುತಿರುವರು ನನಗೂ ಮನಸ್ಸು ಇದೆ ಎನ್ನುವದ ಮರೆತು ....

ನಮಿಸುವೆ  ಈ ವಿರೂಪ ಲೋಕಕೆ ಮನಸ್ಸು ತುಂಬ,
ನನಗೆ ತೂರಿಸಿಕೊಟ್ಟಿದಕ್ಕೆ ನನ್ನ ಬಿಂಬ.....

Saturday, March 20, 2010

Live for LIFE

LIFE !!!!!!! dictionary explains it as "the course of existence or sum of experiences and actions that constitute a person's existence".
                 Life- Live It For Everyone... The basic instinct of human being is selfishness, First u exist, then comes family,then all other things . . . Individually we try to find our existance, which is not at all possible. . We need to see ourselves as the petals of flower, collectively peatls form a beautiful flower, which others can see and enjoy.
               Dont blame anyone for any problem that comes to you, but we need praise everyone when we get the solution. Usually around us we differentiate people into 2 groups, Good and Bad .. we always want to be with good people bcoz they have given good things to us, meanwhile we shouldnot forget that its the bad people, who shown us the bad things, and cautioned us about those bad things, so we should be thankful to them also.
                Life is so short that till the time we plan for it, it ends...... So live it to the full with everyone around you, you may not meet the people again and again so when they are there spend the time with them.....