ಜೀವನದ ಈ ಪುಸ್ತಕದಲ್ಲಿ ,
ಕಳೆದಿದೆ ಪ್ರೇಮದ ಪುಟಗಳು ....
ಹೃದಯದಾ ಈ ಕವಿತೆಯಲಿ ,
ಮಾಸಿದೆ ಪ್ರೀತಿಯ ಪದಗಳು ......
ಕೇಳದೆ ಹೇಳಿದೆ ಕಥೆಯನು ,
ಎಲ್ಲಿವೆ ಆ ಪಾತ್ರಗಳು ........
ಕ್ಷಣ ಕ್ಷಣ ಕೊಲ್ಲುತಿದೆ ,
ಹಳೆಯ ಸುಂದರ ಕ್ಷಣಗಳು ....
ಇಬ್ಬನಿ ಕಂಡಿತೆ ನಿನಗೆ
ನನ್ನ ಕಣ್ಣ ಹನಿಗಳು....
ಮನಸಿನ ಈ ಮಾತುಗಳನು
ಹೇಳಲು ಸಾಲುತ್ತಿಲ್ಲ ಪದಗಳು..........
-ನಯನ
No comments:
Post a Comment