Wednesday, March 31, 2010

ಬಿಂಬ

ಬಿಂಬಿಸಿರಲಿಲ್ಲ ನನ್ನ ಬಿಂಬವ ಆ ಘಳಿಗೆಯ ವರೆಗೂ ,
ನನ್ನ ನೋಡಿ ಹೊರಬಂದಾಗ ಅಪಹಾಸ್ಯದ ನಗು......

ಗೋಚರಿಸುವ ಬಾಹ್ಯ ಅಂದಕೆ ಲೋಕದ ಪ್ರಶಂಸೆ ,
ಅಗೋಚರ ಮನಸ್ಸಿನ ಭಾವನೆಗಳಿಗೆ ಹಿಂಸೆ ...

ನಾನು ಮಾಡಿಕೊಂಡಿರುವುದಲ್ಲ ಈ ನನ್ನ ರೂಪ ,
ಇದ್ದಿರಬಹುದು ಸೃಷ್ಟಿಕರ್ತನಿಗೆ  ಏನೋ ಕೋಪ ....

ಯಾರು ಸಹಿಸುತಿಲ್ಲ ನನ್ನ ರೂಪವ ತಾಯಿಯ ಹೊರತು,
ಯಲ್ಲರೂ ನೋಯಿಸುತಿರುವರು ನನಗೂ ಮನಸ್ಸು ಇದೆ ಎನ್ನುವದ ಮರೆತು ....

ನಮಿಸುವೆ  ಈ ವಿರೂಪ ಲೋಕಕೆ ಮನಸ್ಸು ತುಂಬ,
ನನಗೆ ತೂರಿಸಿಕೊಟ್ಟಿದಕ್ಕೆ ನನ್ನ ಬಿಂಬ.....

No comments:

Post a Comment