Tuesday, May 31, 2011

ದುಡ್ಡು

ದುಡ್ಡು ದುಡ್ಡು .. ದುಡ್ಡು ದುಡ್ಡು ....
ದುಡ್ದೆಂಬೋ ದಡ್ಡು ಬಿತ್ತಲ್ಲೊ ಮಾರಾಯಾ ......

ದುಡ್ಡಿಗೆ ಗೊತ್ತಿಲ್ಲ ಜಾತಿ ನೀತಿ .....
ಎಲ್ಲರ ನುಂಗುವುದು ತಿಳಿ ಗೆಳೆಯ .......

ಬಿಡಿ ಎಂದು ಹೇಳಿಯು ಬಿಡಲಾರೆನು ನಾ...
ಅದುವೇ ನೋಡೋ ದುಡ್ಡಿನ ಮಾಯಾ ....

ಬೇಕದು ಅಷ್ಟಿಷ್ಟು ಯಾವಾಗಲು......
ಗಣತಿಗಿಲ್ಲ ನಿನ್ನ ಪ್ರಾಯ.......

ಮಠಕ್ಕೂ ಬೇಕು, ಚಟಕ್ಕೂ ಬೇಕು, ಬದುಕಲೂ ಬೇಕು.....
ಎಲ್ಲರಿಗೂ ಬೇಕು ದುಡ್ಡಿನ ಅಕ್ಷಯ ......

 
ಗಂಡನಲ್ಲೂ ಬೇಕು ದುಡ್ಡು, ಹೆಂಡತಿಯೂ ತರಬೇಕು ದುಡ್ಡು.....
ಇವೆಲ್ಲದರ ನಡುವೆ ಕಳೆದು ಹೋಗಿದೆ ಹೃದಯ .....

 
ಎಲ್ಲವನ್ನು ಗೆದ್ದಿರಬಹುದು ಈ ದುಡ್ದೆಂಬ ಮಾಯೆ .....
ಗೆಲ್ಲಲಾಗಲಿಲ್ಲ ಅದಕೆ ಪ್ರೀತಿ ಮಮತೆಯ .......

2 comments:

  1. nice..

    visit my blog @ http://ragat-paradise.blogspot.com

    RAGHU

    ReplyDelete