Thursday, April 22, 2010

ಪ್ರೀತಿಋತು

ಬೆಂದು ಹೋಗುವ ಬಿಸಿಲಿನಲಿ,
ಪ್ರೀತಿಯೆಂಬ ಧಾರೆಯ ಹುಡುಕಾಟದಲಿ,
ಹೋರಟೆ ನಾನು ........

ಸಮಾಜವೆಂಬ ಬೆಂಕಿ ಪಾದದಡಿಯಲಿ,
ತಿರಸ್ಕಾರದ ಭಾವ ಇತರರ ಮಾತಿನಲಿ,
ಪಡೆದೆ ನಾನು.........

ಪುಳುಕಿತಗೊಳಿಸುವ ತುಂತುರು ಮಳೆ ,
ಮೊಳಕೆಯೋಡೆಯುವುದೆಂದು  ಪ್ರೀತಿಯ ಬೆಳೆ,
ತಿಳಿದೆ ನಾನು............


ಜಾತಿ ಮತವೆಂಬ ಈ ಕಳೆ,
ಮಾಡಿತು ನಿರ್ಮಲ ಪ್ರಿತಿಯನು ಕೊಳೆ,
ಮರಗುವೆನು ನಾನು .........

ಚುಮು ಚುಮು ಚಳಿಯ ಚಳಿಗಾಲ,
ಪ್ರೀತಿ ಬದಲಾಗಲಿಲ್ಲ ಬದಲಾದರೂ ಕಾಲ,
ಸಂತೋಷ ಪಡುವೆನು ನಾನು.......

ಸಮಾಜದಲಿ ಅಹಂ ಎನ್ನುವ  ಭಾವ ಸ್ಥೂಲ,
ಸ್ಫಂದಿಸುವ ಮನಗಳಿಗೆ ಅದೇ ಶೂಲ,
ಸಮಾಜದ ಭಾಗವಾಗಿ ಹೋದೆ ನಾನು ......

                                             - ನಯನ

6 comments:

  1. ನಯನರೇ ಚನ್ನಾಗಿವೆ ಸಾಲುಗಳು..ಭಾವನೆಯ ವಿವಿಧತೆ...ಪ್ರೀತಿಸಿಗುವುದು ಬಿಡುವುದು ಪ್ರೀತಿಸೋ ಮನಗಳಿಗೆ ಮೀಸಲು ಅಲ್ವಾ...good Luck...

    ನಯನರೇ...ನನ್ನ ಅನಿಸಿಕೆ...ಕೆಳಗಡೆಯ ಮೂರನೇ ಸಾಲಿನಲ್ಲಿ ಹೊರಟೆ...ಇರಬೇಕಿತ್ತು...ಹೋರಟೆ ಆಗಿದೆ
    ಬೆಂದು ಹೋಗುವ ಬಿಸಿಲಿನಲಿ,
    ಪ್ರೀತಿಯೆಂಬ ಧಾರೆಯ ಹುಡುಕಾಟದಲಿ,
    ಹೋರಟೆ ನಾನು ........

    ಹಾಗೆಯೇ....ಮೊಳಕೆಯೊಡೆಯುವುದೆಂದು ಇರಬೇಕಿತ್ತು ..ಮೊಳಕೆಯೋಡೆ...ಅಂತ ಇದೆ...

    ಪುಳುಕಿತಗೊಳಿಸುವ ತುಂತುರು ಮಳೆ ,
    ಮೊಳಕೆಯೋಡೆಯುವುದೆಂದು ಪ್ರೀತಿಯ ಬೆಳೆ,
    ತಿಳಿದೆ ನಾನು............

    ReplyDelete
  2. ಸು೦ದರ ಬರಹ...ಇಷ್ಟವಾಯಿತು.

    http://chithrapata.blogspot.com/

    ReplyDelete
  3. ಎಲ್ಲರಿಗೂ ಧನ್ಯವಾದ

    ReplyDelete